ಬುಧವಾರ, ಡಿಸೆಂಬರ್ 24, 2014

Current Affairs Gk

ಡಿಸೆಂಬರ್ 24, 2014

1. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಚೆಗೆ 'ಏಷ್ಯ ಕಾಸ್ಮೋಪಾಲಿಟನ್' ಪ್ರಶಸ್ತಿ ಬಂತು. ಅಂದಹಾಗೆ ಇದು ಯಾವ ದೇಶ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ?

A. ಸಿಂಗಪುರ
B. ಬ್ರಿಟನ್
C. ಜಪಾನ್ ●
D. ಅಮೆರಿಕಾ

◇◆◇◆◇◆◇◆◇◆◇◆

2. ಅಮೆರಿಕಾ ಈಚೆಗೆ ಯಾವ ದೇಶದ ಜತೆಗಿನ 53 ವರ್ಷಗಳ ಹಗೆತನ ಕೊನೆಗೊಳಿಸಿ ಸ್ನೇಹ ಹಸ್ತ ಚಾಚಿತು?

A. ಈಜಿಪ್ಟ್
B. ಕ್ಯೂಬಾ ●
C. ಇರಾಕ್
D. ಇಸ್ರೇಲ್

◇◆◇◆◇◆◇◆◇◆◇◆

3. ಸಚಿನ್ ತೆಂಡೂಲ್ಕರ್ 2015ರ ವಿಶ್ವಕಪ್'ನ ರಾಯಭಾರಿಯಾಗಿ ನೇಮಕಗೊಂಡರು. ಅಂದಹಾಗೆ ಅವರು ಈ ಮುಂಚೆ ಕೆಳಕಂಡ ಯಾವ ವರ್ಷ ನಡೆದ ವಿಶ್ವಕಪ್'ನ ರಾಯಭಾರಿಯಾಗಿದ್ದರು?

A. 1999
B. 2003
C. 2007
D. 2011 ●

◇◆◇◆◇◆◇◆◇◆◇◆

4. 'ಸಂದೇಶ ಪ್ರಶಸ್ತಿ' ಈಚೆಗೆ ಕೆಳಕಂಡ ಯಾವ ಕಲಾವಿದೆಗೆ ಬಂತು?

A. ತಾರಾ
B. ಜಯಮಾಲಾ ●
C. ಶೃತಿ
D. ಭಾರತಿ

◇◆◇◆◇◆◇◆◇◆◇◆

5. ಭಾರತದ 'ಮಂಗಳಯಾನ' ಉಪಗ್ರಹ ಮಂಗಳನ ಅಂಗಳದಲ್ಲಿ ಪ್ರವೇಶಿಸಿದ್ದು ಯಾವ ದಿನ?

A. ಆಗಸ್ಟ್ 19, 2014
B. ಸೆಪ್ಟೆಂಬರ್ 9, 2014
C. ಸೆಪ್ಟೆಂಬರ್ 16, 2014
D. ಸೆಪ್ಟೆಂಬರ್ 24, 2014 ●

◇◆◇◆◇◆◇◆◇◆◇◆
6. ಕೆಳಕಂಡವುಗಳಲ್ಲಿ ಯಾವ ಶಬ್ದದ ಬಳಕೆ ಸರಿ?

A. ನಿಶ್ಯಬ್ದ
B. ನಿಶ್ಶಬ್ದ ●

◇◆◇◆◇◆◇◆◇◆◇◆

7. ಬಾಬರ್ ನಿಧನವಾದದ್ದು ಎಲ್ಲಿ?

A. ದೆಹಲಿ
B. ಆಗ್ರಾ ●
C. ಕಾನಪುರ
D. ಅಹಮದಾಬಾದ್

◇◆◇◆◇◆◇◆◇◆◇◆

8. ಕಂಪ್ಯೂಟರ್'ನಲ್ಲಿ ಯಾವುದೇ ಒಂದು ಶಬ್ದದ ಉದ್ದಳತೆಯನ್ನು ಯಾವುದರಿಂದ ಅಳೆಯಲಾಗುತ್ತದೆ?

A. ಮೈಕ್ರಾನ್'ನಿಂದ
B. ಮಿಲಿ ಮೀಟರ್'ನಿಂದ
C. ಮೀಟರ್'ನಿಂದ
D. ಬಿಟ್ಸ್'ನಿಂದ ●

◇◆◇◆◇◆◇◆◇◆◇◆

9. ಕೆಳಕಂಡವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?

A. ದುರ್ಗಾದಾಸ್ - 'ಇಂಡಿಯಾ ಫ್ರಾಮ್ ಕರ್ಜನ್ ಟು ನೆಹರು ಅಂಡ್ ಆಫ್ಟರ್' ●
B. ಲಾರಿ ಕಾಲಿನ್ಸ್ ಅಂಡ್ ಡಾಮಿನಿಕ್ ಲ್ಯಾಪಿಯರೆ - 'ಇಂಡಿಯಾ ಡಿವೈಡೆಡ್'
C. ರಾಜೇ೦ದ್ರ ಪ್ರಸಾದ್ - 'ಡಿಸ್ಕವರಿ ಆಫ್ ಇಂಡಿಯಾ'
D. ಮೌಲಾನಾ ಅಬುಲ್ ಕಲಾಮ್ ಆಝಾದ್ -'ಫ್ರೀಡಂ ಎಟ್ ಮಿಡ್ ನೈಟ್'

◇◆◇◆◇◆◇◆◇◆◇◆

10. ಕೆಳಕಂಡವುಗಳಲ್ಲಿ ಯಾವುದು ಜಿ-20 ಸದಸ್ಯ ರಾಷ್ಟ್ರವಲ್ಲ?

A. ಭಾರತ
B. ಪಾಕಿಸ್ತಾನ ●
C. ರಷ್ಯಾ
D. ಇಂಡೋನೇಷ್ಯ

◇◆◇◆◇◆◇◆◇◆◇◆

23 dec 2014

1. 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?

A. ಸಂತೂರ್
B. ಸರೋದ್ ●
C. ತಬಲಾ
D. ವೀಣೆ

◇◆◇◆◇◆◇◆◇◆◇◆

2. ಈ ಸಾಲಿಗಾಗಿ 'ಇಪಿಎಫ್' ಬಡ್ಡಿ ದರವನ್ನು ಶೇಕಡಾ ಎಷ್ಟು ಎಂದು ನಿಗದಿ ಪಡಿಸಲಾಗಿದೆ?

A. 8.25%
B. 8.50%
C. 8.75% ●
D. 9.00%

◇◆◇◆◇◆◇◆◇◆◇◆

3. ಮೆಕ್ಕೆಜೋಳ ಖರೀದಿಯ ಬೆಂಬಲ ಬೆಲೆಯನ್ನು ಸರ್ಕಾರ ಎಷ್ಟು ಎಂದು ನಿಗದಿಪಡಿಸಿದೆ ?

A. 1000 ರೂ.
B. 1050 ರೂ.
C. 1100 ರೂ. ●
D. 1150 ರೂ.

◇◆◇◆◇◆◇◆◇◆◇◆

4. 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?

A. ಪ್ರೊ.ಚಂದ್ರಶೇಖರ್ ಪಾಟೀಲ
B. ಡಾ. ಜಿ. ಎಚ್. ನಾಯಕ ●
C. ಡಾ. ಎಂ. ಎಂ. ಕಲಬುರ್ಗಿ
D. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

◇◆◇◆◇◆◇◆◇◆◇◆

5. ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ದೊರೆಯುವ ನಗದು ಬಹುಮಾನದ ಮೊತ್ತ ಎಷ್ಟು?

A. 50,000 ರೂ.
B. 75,000 ರೂ
C. 1 ಲಕ್ಷ ರೂ. ●
D. 2 ಲಕ್ಷ ರೂ.

◇◆◇◆◇◆◇◆◇◆◇◆

6. ಈ ಕೆಳಕಂಡವುಗಳಲ್ಲಿ ಸ್ಪೇನ್ ದೇಶದ ಕರೆನ್ಸಿ ಯಾವುದು?

A. ಫ್ರ್ಯಾಂಕ್
B. ಪೌಂಡ್
C. ಪೆಸೆಟಾ
D. ಯೂರೊ ●

◇◆◇◆◇◆◇◆◇◆◇◆

7. 'ಪ್ರಧಾನಮಂತ್ರಿ ಜನಧನ್ ಯೋಜನೆ'ಯನ್ವಯ ಕೆಳಕಂಡ ಯಾವ ಲಾಭ ದೊರೆಯಲಿದೆ?

A. ಓವರ್'ಡ್ರಾಫ್ಟ್ ಸೌಲಭ್ಯ ●
B. 5 ಲಕ್ಷ ರೂ ಅಪಘಾತ ವಿಮೆ
C. 2 ಲಕ್ಷ ರೂ ಜೀವವಿಮೆ
D. B ಮತ್ತು C

◇◆◇◆◇◆◇◆◇◆◇◆

8. 'FII' ನ ವಿಸ್ತಾರ ರೂಪ ಏನು?

A. Foreign Investment Interest
B. Foreign Institutional Investment ●
C. Foreign Intrest Investment
D. Foreign Institutional Interest

◇◆◇◆◇◆◇◆◇◆◇◆

9. 'The mother I Never knew' ಈ ಕೃತಿಯ ಲೇಖಕರು ಯಾರು?

A. ಝುಂಪಾ ಲಾಹಿರಿ
B. ಸುಧಾ ಮೂರ್ತಿ ●
C. ಇಮ್ತಿಯಾಜ್ ಗುಲ್
D. ಕಿರಣ್ ದೇಸಾಯಿ

◇◆◇◆◇◆◇◆◇◆◇◆

10. ಗುಂಪಿಗೆ ಹೊಂದದ ದೇಶವನ್ನು ಗುರುತಿಸಿ.

A. ಪೋಲಂಡ್
B. ಕೊರಿಯಾ ●
C. ಸ್ಪೇನ್
D. ಗ್ರೀಸ್

◇◆◇◆◇◆◇◆◇◆◇◆

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ